ದಂತಧಾವನ ಕಾಷ್ಠಗಳ ಮಹತ್ವ, ಅಪಾಯಕಾರಿ ಟೂತ್‌ಪೇಸ್ಟ್

ದಂತಧಾವನ ಕಾಷ್ಠಗಳ ಮಹತ್ವ, ಅಪಾಯಕಾರಿ ಟೂತ್‌ಪೇಸ್ಟ್
ಸಾ ಮಾನ್ಯವಾಗಿ ದಂತಧಾವನಕ್ಕೆ ಬಳಸುವ ಕಾಷ್ಠಗಳ (ಕಡ್ಡಿಗಳ) ಆಯ್ಕೆಯು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ.
ಈ ಕಾಷ್ಠಗಳು ಆಯಾ ಋತುಗಳ ದೋಷ ನಿವೃತ್ತಿಗೆ (ದೋಷಗಳು ಎಂದರೆ ತ್ರಿದೋಷಗಳಾದ ವಾತ, ಪಿತ್ತ ಮತ್ತು ಕಫ ಇವು ಆಯುರ್ವೇದ ವೈದ್ಯಕೀಯ ವಿಜ್ಞಾನದ ಬುನಾದಿ. ಆಯುರ್ವೇದದ ಬಗ್ಗೆ ತಿಳಿಯುವವರಿಗೆ ಈ ತ್ರಿದೋಷಗಳ ಜ್ಞಾನ ಅತ್ಯಗತ್ಯ.) ಅನುಕೂಲವಾದ ರಸಗಳನ್ನು ಹೊಂದಿರಬೇಕು (ಕಟು,ತಿಕ್ತ,ಕಷಾಯ). ಕಟು (ಖಾರ) ರಸವುಳ್ಳ ಕಡ್ಡಿಗಳಲ್ಲಿ ಹೊಂಗೆಯು, ತಿಕ್ತ (ಕಹಿ) ರಸವುಳ್ಳ ಕಡ್ಡಿಗಳಲ್ಲಿ ಬೇವೂ ಮತ್ತು ಕಷಾಯ (ಒಗರು) ರಸವುಳ್ಳ ಕಡ್ಡಿಗಳಲ್ಲಿ ಜಾಲಿ ಕಡ್ಡಿಯೂ ಶ್ರೇಷ್ಠವಾದುದ್ದು. ಮಧುರ (ಸಿಹಿ) ಅವಶ್ಯಕತೆ ಇದ್ದಲ್ಲಿ ಹಿಪ್ಪೆಕಡ್ಡಿಯು ಸೂಕ್ತ. ಕಾಷ್ಠಗಳು ಹಸಿಯಾಗಿದ್ದು ದುರ್ಗಂಧ ರಹಿತವಾಗಿರಬೇಕು.
ತ್ರಿಕಟು (ಹಿಪ್ಪಲಿ+ ಕಾಳುಮೆಣಸು+ ಒಣಶುಂಠಿ) ಮತ್ತು ಸೈಂದವಲವಣವನ್ನು ಪುಡಿಮಾಡಿ ಜೇನಿನೊಂದಿಗೆ ಸೇರಿಸಿ ಪಿಷ್ಠ ಮಾಡಿ (Paste) ಹಲ್ಲನ್ನು ಉಜ್ಜುವುದರಿಂದ ಬಾಯಿಯ ದುರ್ನಾತ ನಿವಾರಿಸಿ ಹಲ್ಲನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.
ಅಜೀರ್ಣವುಳ್ಳವರು, ವಾಂತಿಯಿಂದ ಬಳಲುತ್ತಿರುವವರು, ಕೆಮ್ಮು, ಶ್ವಾಸ, ಜ್ವರ, ಬಾಯಿ, ಗಂಟಲು ಮತ್ತು ಮೂಗು, ಶಿರೋರೋಗ ಮತ್ತು ಮೂರ್ಛೆರೋಗದಿಂದ ಪೀಡಿತವಾದವರು ದಂತಕಾಷ್ಠವನ್ನು ಉಪಯೋಗಿಸದೆ ಮೇಲೆ ತಿಳಿಸಿದಂತ ಪಿಷ್ಠವನ್ನು ಬೆರಳಿನ ತುದಿಗೆ ಹಚ್ಚಿಕೊಂಡು ದಂತಧಾವನವನ್ನು ಮಾಡಬೇಕು.
ಇಂದಿನ ಜೀವನ ಶೈಲಿಯಲ್ಲಿ ಪಾಶ್ಚಾತ್ಯರ ಸಂಪರ್ಕ ಹೆಚ್ಚಿದಂತೆಲ್ಲ ದಂತ ಕಾಷ್ಠಗಳಿಗೆ ಬದಲಾಗಿ ನೈಲಾನ್ ಬ್ರಷ್‌ಗಳು ಮತ್ತು ಟೂತ್‌ಪೇಸ್ಟ್‌ಗಳು ಉಪಯೋಗಕ್ಕೆ ಬಂದಿವೆ. ಇವುಗಳನ್ನು ಉಪಯೋಗಿಸುವುದರಿಂದ ಅಡ್ಡಪರಿಣಾಮಗಳಲ್ಲದೆ (Adverse effect) ಋತುಗಳಿಗನುಸಾರವಾಗಿರುವ ರಸ ಪ್ರಾಧಾನ್ಯತೆಯ (ಕಟು,ಪಿತ್ತ,ಕಷಾಯ) ಕೊರತೆ ಉಂಟಾಗುತ್ತದೆ.
ಇಷ್ಟಲ್ಲದೆ ನಾವು ದಿನನಿತ್ಯ ಬಳಕೆ ಮಾಡುವ ಟೂತ್‌ಪೇಸ್ಟ್ ಬಗ್ಗೆ ತಿಳಿದುಕೊಳ್ಳಬೇಕಾದ ಬಹಳ ಮುಖ್ಯವಾದ ವಿಚಾರಗಳಿವೆ. ಟೂತ್‌ಪೇಸ್ಟ್‌ನಲ್ಲಿ ೩ ಪ್ರಮುಖವಾದ ಅಂಶಗಳು, ಸಾಮಾನ್ಯವಾಗಿ ಹೆಚ್ಚಿನದಲ್ಲಿ ಇರುವಂತದ್ದು. (1) Sorbitol – ದ್ರವ ಪದಾರ್ಥ-ಟೂತ್‌ಪೇಸ್ಟ್ ಅನ್ನು ಒಣಗದಂತೆ ತಡೆಗಟ್ಟುವುದು. ಇದು Laxative (ಭೇದಿಕಾರಕ) ಇದರಿಂದ ಮಕ್ಕಳಲ್ಲಿ ಭೇದಿಯಾಗಬಹುದು, (2) Sodium lauryl sulphate ಅನ್ನುವಂಥದ್ದು ಟೂತ್‌ಪೇಸ್ಟ್‌ನಲ್ಲಿ ನೊರೆ ಉತ್ಪತ್ತಿ ಮಾಡುತ್ತದೆ, ಇದೂ ಭೇದಿಯನ್ನುಂಟು ಮಾಡುತ್ತದೆ, ಜತೆಗೆ ಹಲ್ಲಿನ ಬಿಳುಪನ್ನು ಹೆಚ್ಚಿಸಲು ಬಳಸುವ (3) Flouride-ಎನ್ನುವಂಥ ಅಂಶ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಬಹಳ ಅಪಾಯಕಾರಿ. ಇದನ್ನು ಹೊರ ದೇಶಗಳಲ್ಲಿ Drug (ಔಷಧ) ಎಂದು ಪರಿಗಣಿಸಿದ್ದು, ನಾವು ದಿನಿನಿತ್ಯ ಬಳಸುತ್ತಿರವುದು ವಿಪರ್ಯಾಸವೇ ಸರಿ.
ಇತ್ತೀಚಿನ ವರದಿ ಪ್ರಕಾರ Flouride ನ ಕನಿಷ್ಠ ಅಪಾಯದ ಪ್ರಮಾಣ (Minimum lethal dose) 5mg/kg body weight (ಅಂದರೆ ದೇಹ ತೂಕದ ಪ್ರತಿ ಕೆ.ಜಿ.ಗೆ ೫ ಎಂ.ಜಿ. ಫ್ಲೋರೈಡ್).ಹಲವಾರು ವೈದ್ಯಕೀಯ ಪ್ರಬಂಧದ ಪ್ರಕಾರ, ಈ ಪ್ರಮಾಣವು ‘ಬಹುಶಃ ವಿಷ ಪ್ರಮಾಣ (“The Probably Toxic Dose”-PTD). ಇದು ಒಬ್ಬ ಮನುಷ್ಯನ ಸಾವನ್ನುಂಟು ಮಾಡುತ್ತದೆ.
ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ಟೂತ್‌ಪೇಸ್ಟ್ (ಸ್ಟ್ಯಾಂಡರ್ಡ್ ಬ್ರ್ಯಾಂಡ್ಸ್)ಗಳಲ್ಲಿ ಈ ಮೇಲೆ ಹೇಳಿದ ಪ್ರಮಾಣದಲ್ಲಿ ಫ್ಲೋರೈಡ್ ಇದೆ ( http://www2.fluoridealert.org/Alert/United-States/National/Toothpaste-How-Safe). ಹೊರದೇಶಗಳಲ್ಲಿ ಟೂತ್‌ಪೇಸ್ಟ್‌ನ ಕವರ್ ಮೇಲೆ ” ಬ್ರಷ್ ಮಾಡುವುದಕ್ಕೆ ಉಪಯೋಗಿಸುವ ಪ್ರಮಾಣಕ್ಕಿಂತ ಹೆಚ್ಚಿಗೆ ಸೇವಿಸಿದಲ್ಲಿ ಕೂಡಲೇ ಸ್ಥಳೀಯ ವೈದ್ಯಕೀ ಸಹಾಯ ಪಡೆಯಬೇಕು”ಎಂಬುದನ್ನು ನಮೂದಿಸಿರುವುದರಿಂದ ಇದರ ಅಪಾಯ ಎಷ್ಟಿದೆ ಎಂಬುದನ್ನು ನೀವೇ ಊಹಿಸಿ.
ಫ್ಲೋರೈಡ್‌ನ ವಿಷಯವಾಗಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಅದರ ಅಡ್ಡಪರಿಣಾಮಗಳಾದ Allergy, Hypersensitivity, Gastrointestinal and Skin Irritation ಗಳ ಬಗ್ಗೆ ಸಾಕಷ್ಟು ಪ್ರಬಂಧಗಳನ್ನು ಸಹ ಮಂಡಿಸಿರುತ್ತಾರೆ. ಇಷ್ಟೆಲ್ಲಾ ಮಾಹಿತಿ ಲಭ್ಯವಿದ್ದರೂ ಮೂಲೆಮೂಲೆಗಳಲ್ಲಿ ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ಗಳು ವ್ಯವಸ್ಥಿತವಾಗಿ ಮಾರಾಟವಾಗುತ್ತಿದ್ದು, ಶೇಕಡಾ ೭೬.೮ ರಷ್ಟು ನಗರ ಹಾಗೂ ೨೩.೨ ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟವಾಗುತ್ತಿವೆ. ೪-೫ ವರ್ಷಗಳಲ್ಲಿ ಶೇಕಡಾ ೭-೮ ವೃದ್ಧಿಯನ್ನು ಹೊಂದಿರುವ ಈ ವ್ಯವಹಾರವು ಭಾರತದಲ್ಲಿ ಸರಾಸರಿ ಒಂದು ಸಾವಿರ ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
ಇಷ್ಟೆಲ್ಲಾ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಇದ್ದೂ ಪಾಶ್ಚಿಮಾತ್ಯರ ಕೊಡುಗೆಯಾದ ಈ ಟೂತ್‌ಪೇಸ್ಟ್ ಉದ್ಯಮ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವುದು ವಿಪರ್ಯಾಸವೇ ಸರಿ. ( http://www.fluoridealert.org/, www.flouridation.com , http://www.diehardindian.com/)
ಇದರ ಹೊಡೆತದಿಂದಾಗಿ ನಮ್ಮ ಪೂರ್ವಜರು ತಿಳಿಸಿದಂತ ದಂತಧಾವನ ಮತ್ತು ದಂತಕಾಷ್ಠಗಳನ್ನು ನಮ್ಮ ಪೂರ್ವಿಕರಿಗೆ ಬಿಟ್ಟು ನಾವು ಪಾಶ್ಚಾತ್ಯರನ್ನು ಅನುಸರಿಸಿ ಸಮಸ್ಯೆ ಸುಳಿಯಲ್ಲಿ ಸಿಲುಕಲು ಅನುಕೂಲವಾಗುತ್ತಿದೆಯೇ ಎಂಬ ಅಂಶದ ಬಗ್ಗೆ ಅಲೋಚಿಸಬೇಕು.